Business is booming.

ಸಿಗಂದೂರು ಚೌಡೇಶ್ವರಿ ತಾಯಿಯ ಕುರಿತು ನಿಮಗೆಷ್ಟು ಗೊತ್ತೇ?? ದೇವಸ್ಥಾನದ ನಿರ್ಮಾಣದ ಹಿಂದಿನ ಕಥೆಯೇನು ಗೊತ್ತೇ??

3

ನಮಸ್ಕಾರ ಸ್ನೇಹಿತರೇ ನಮ್ಮ ಭಾರತದೇಶ ಎನ್ನುವುದು ಹಿಂದೂ ಸಂಸ್ಕೃತಿಯ ಬುನಾದಿ ಇಂದ ಹುಟ್ಟಿದಂತಹ ದೇಶ. ಹೀಗಾಗಿ ನಮ್ಮ ದೇಶದಲ್ಲಿ ಧಾರ್ಮಿಕ ಕ್ಷೇತ್ರಗಳಿಗೆ ಪ್ರಾಮುಖ್ಯತೆ ಹೆಚ್ಚಾಗಿದೆ. ಇನ್ನು ನಮ್ಮ ಕರ್ನಾಟಕದಲ್ಲಿ ಕೂಡ ಜಗತ್ಪ್ರಸಿದ್ಧ ವಾಗಿರುವ ಹಲವಾರು ಧಾರ್ಮಿಕ ದೇವಸ್ಥಾನಗಳಿವೆ. ಹೌದು ಗೆಳೆಯರೇ ಇಂದಿನ ವಿಚಾರದಲ್ಲಿ ನಮ್ಮ ಕರ್ನಾಟಕ ರಾಜ್ಯದ ಅತ್ಯಂತ ಪ್ರಸಿದ್ಧವಾಗಿರುವ ದೇವಸ್ಥಾನಗಳಲ್ಲಿ ಒಂದಾಗಿರುವ ಸಿಗಂದೂರು ಚೌಡೇಶ್ವರಿಯ ದೇವಸ್ಥಾನದ ಕುರಿತಂತೆ ಮಾತನಾಡಲು ಹೊರಟಿದ್ದೇವೆ. ಸಿಗಂದೂರು ಚೌಡೇಶ್ವರಿ ದೇವಾಲಯ ಇರುವುದು ಶಿವಮೊಗ್ಗದ ಶರಾವತಿ ನದಿ ತಟದ ಮೇಲೆ.

ಕಾನನದ ಹಸಿರನ್ನು ಉಟ್ಟುಕೊಂಡು ಪ್ರಕೃತಿಯ ನಡುವೆ ನೆಲೆಸಿರುವ ಸಿಗಂದೂರು ಚೌಡೇಶ್ವರಿ ಯನ್ನು ನೋಡಲು ಪ್ರತಿ ವರ್ಷ ಲಕ್ಷಾಂತರ ಭಕ್ತಾದಿಗಳು ಬರುತ್ತಾರೆ. ಒಂದು ಕಾಲದಲ್ಲಿ ಕೇವಲ ಪ್ರಾದೇಶಿಕ ಭಕ್ತರಿಗೆ ಮೀಸಲಾಗಿದ್ದ ಸಿಗಂದೂರು ಚೌಡೇಶ್ವರಿ ದೇವಾಲಯ ಈಗ ದೇಶ-ವಿದೇಶಗಳಿಂದ ಭಕ್ತಾಭಿಮಾನಿಗಳು ಬಂದು ಸಾನಿಧ್ಯವನ್ನು ಅನುಭವಿಸುವಂತಹ ಭಾಗ್ಯ ನೀಡುವಷ್ಟರ ಮಟ್ಟಿಗೆ ಬೆಳೆದು ನಿಂತಿದೆ ಎಂದು ಹೇಳಬಹುದಾಗಿದೆ. ಇನ್ನು ದೇವಸ್ಥಾನ ಹೇಗೆ ಹುಟ್ಟಿತು ಎನ್ನುವ ಕುರಿತಂತೆ ಕೂಡ ಒಂದು ಸ್ವಾರಸ್ಯಕರ ಕಥೆಯಿದೆ. ಹೌದು ಗೆಳೆಯರೇ ಶೇಷಪ್ಪ ಎನ್ನುವವರೇ ಮಾರ್ಗದಲ್ಲಿ ಹೋಗುತ್ತಿರುವೆ ಕಾದರೆ ಅವರ ಕನಸಿನಲ್ಲಿ ಬಂದಂತಹ ಸಿಗಂದೂರು ಚೌಡೇಶ್ವರಿ ಮಾತೆ ಇಲ್ಲೇ ಇರುವಂತಹ ನದಿಯಲ್ಲಿ ವಿಗ್ರಹವನ್ನು ತೆಗೆದುಕೊಂಡು ಇಲ್ಲಿ ದೇವಸ್ಥಾನ ಮಾಡಬೇಕು ಎನ್ನುವುದಾಗಿ ಹೇಳುತ್ತಾರೆ. ನಿದ್ರೆಯಿಂದ ಎದ್ದ ತಕ್ಷಣ ಶೇಷಪ್ಪನವರಿಗೆ ನದಿಯಲ್ಲಿ ವಿಗ್ರಹ ಕಾಣಿಸುತ್ತದೆ.

ನಂತರ ಶೇಷಪ್ಪನವರು ತಮ್ಮ ಊರಿನ ಬ್ರಾಹ್ಮಣ ರಾಗಿರುವ ದುಗ್ಗಜ್ಜ ರವರನ್ನು ಸೇರಿದಂತೆ ಎಲ್ಲರನ್ನೂ ಕರೆದುಕೊಂಡು ಬಂದು ಅದೇ ಸ್ಥಳದಲ್ಲಿ ಸಿಗಂದೂರು ಚೌಡೇಶ್ವರಿ ದೇವಸ್ಥಾನ ವನ್ನು ಕಟ್ಟುತ್ತಾರೆ. ಸಿಗಂದೂರು ಕ್ಷೇತ್ರದ ಇನ್ನೊಂದು ವಿಶೇಷವೇನೆಂದರೆ ಇಲ್ಲಿ ಬಹುತೇಕ ಎಲ್ಲಾ ಅಂಗಡಿ ಮುಂಗಟ್ಟುಗಳಿಗೆ ಹಾಗೂ ಮನೆಗಳಿಗೆ ಚೌಡೇಶ್ವರಿ ಮಾತೆಯ ಬೋರ್ಡನ್ನು ಹಾಕಲಾಗುತ್ತದೆ. ಹೀಗಾಗಿ ಆಕೆಯ ಮಹಿಮೆಯಿಂದಾಗಿ ಇಲ್ಲಿ ಕಳ್ಳತನ ನಡೆಯುವುದಿಲ್ಲ. ಇಲ್ಲಿವರೆಗೂ ಚೌಡೇಶ್ವರಿ ಮಾತೆಯ ದರ್ಶನವನ್ನು ಪಡೆದುಕೊಂಡು ಹೋಗಿರುವ ಎಲ್ಲರೂ ಕೂಡ ಒಳ್ಳೆಯದನ್ನೇ ಕಂಡಿದ್ದಾರೆ. ಸಿಗಂದೂರು ಚೌಡೇಶ್ವರಿ ಮಾತೆಯ ಮಹಿಮೆಯನ್ನು ಹೊಗಳಲು ಪದಗಳು ಸಾಲದು ದಿನಗಳು ಕೂಡ ಸಾಲದು ಎಂದು ಹೇಳಬಹುದಾಗಿದೆ. ನೀವು ಕೂಡ ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ಭೇಟಿ ಮಾಡಿದ್ದಾರೆ ತಪ್ಪದೇ ನಮ್ಮೊಂದಿಗೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave A Reply

Your email address will not be published.